ಪೋಟೋ ಶೂಟ್ ವೇಳೆ ರೈಲು ಢಿಕ್ಕಿ ➤ ಯುವಕ ಮೃತ್ಯು..!



(ನ್ಯೂಸ್ ಕಡಬ) newskadaba.com ದಾವಣಗೆರೆ, ಜ. 24. ರೈಲ್ವೇ ಹಳಿಯಲ್ಲಿ ನಿಂತು ಫೋಟೋಶೂಟ್ ನಡೆಸುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ.








ಮೃತ ಯುವಕನನ್ನು ಸಚಿನ್(16) ಎಂದು ಗುರುತಿಸಲಾಗಿದೆ. ಈತ ಫೋಟೋಶೂಟ್ ನಡೆಸುತ್ತಿದ್ದ ವೇಳೆ ರೈಲು ಬಂದಿದ್ದು, ಅದು ಪಕ್ಕದ ಹಳಿಯಲ್ಲಿ ಹೋಗಬಹುದು ಎಂದು ಭಾವಿಸಿ ಅಲ್ಲೇ ನಿಂತ ಯುವಕನಿಗೆ ರೈಲು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 

error: Content is protected !!
Scroll to Top