ಬಿಸಿನೀರು ಮೈಮೇಲೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಸವಣೂರು, ನ. 17. ಬಿಸಿ ನೀರು ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸವಣೂರಿನಲ್ಲಿ ನಡೆದಿದೆ.

ಮೃತರನ್ನು ಸವಣೂರು ಗ್ರಾಮದ ಮಾಂತೂರು ನಿವಾಸಿ ಕುಂಞಾಲಿಮ್ಮ (60 ವ.)ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು, ನ.15 ರಂದು ಸಂಜೆ ಸ್ನಾನಕ್ಕೆಂದು ಕಾಯಿಸಿಟ್ಟಿದ್ದ ಬಿಸಿನೀರಿನ ಪಾತ್ರೆಯನ್ನು ಎತ್ತಿಕೊಂಡು ಬಚ್ಚಲು ಕೋಣೆಗೆ ಒಯ್ಯುತ್ತಿದ್ದಾಗ ಆಕಸ್ಮಿಕವಾಗಿ ಬಿಸಿನೀರು ತುಂಬಿದ್ದ ಪಾತ್ರೆ ಕೈ ಹಿಡಿತದಿಂದ ಜಾರಿ ಬಿಸಿ ನೀರು ಮೈ-ಮೇಲೆ ಬಿದ್ದು ಸುಟ್ಟ ಗಾಯಗಳಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top