ವಿದ್ಯಾರ್ಥಿಗೆ ಹುಚ್ಚು ನಾಯಿ ಕಡಿತ ➤ ನಾಯಿಯನ್ನು ಹೊಡೆದು ಕೊಂದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಡಬ, ನ.17. ಹುಚ್ಚುನಾಯಿಯೊಂದು ಕಡಿದ ಪರಿಣಾಮ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಕಡಬ ಪೇಟೆಯಲ್ಲಿ ಬುಧವಾರದಂದು ನಡೆದಿದೆ.

ಗಾಯಗೊಂಡ ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದೆ. ಎಂದಿನಂತೆ ಮದರಸ ಬಿಟ್ಟು ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ಎರಗಿದ್ದು, ಕೈಗೆ ಕಚ್ಚಿದೆ‌ ಎಂದು ತಿಳಿದುಬಂದಿದೆ. ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹುಚ್ಚುನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ. ವಾರದ ಹಿಂದೆ ಕಡಬದ ಹಳೇಸ್ಟೇಷನ್ ಸಮೀಪ ಬಾಪೂಜಿ ನಗರದಲ್ಲಿಯೂ ಹುಚ್ಚುನಾಯಿ ಹಾವಳಿ ಕಂಡುಬಂದಿತ್ತು.

 

 

Scroll to Top