ಪರೀಕ್ಷೆಯಲ್ಲಿ ನಕಲು ಮಾಡುವ ಆತಂಕ ➤ ಮೂರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ತಾತ್ಕಾಲಿಕ ಸ್ಥಗಿತ..!

(ನ್ಯೂಸ್ ಕಡಬ) Newskadaba.com ಬಿಕಾನೇರ್, ಅ. 23. ಪಟ್ವಾರಿ ನೇಮಕಾತಿ ಪರೀಕ್ಷೆಯ ಹಿನ್ನೆಲೆ ರಾಜಸ್ಥಾನದ ಬಿಕಾನೇರ್, ಜೈಪುರ ಹಾಗೂ ದೌಸಾ ಜಿಲ್ಲೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಿಕಾನೇರ್ ವಿಭಾಗೀಯ ಆಯುಕ್ತ ಬಿ.ಎಲ್. ಮೆಹ್ರಾ ಆದೇಶಿಸಿದ್ದಾರೆ.

 

ಉತ್ತರ ಭಾರತದಲ್ಲಿ ನಡೆಯುವ ವಿವಿಧ ಪರೀಕ್ಷೆಗಳಲ್ಲಿ ಆಧುನಿಕ ವ್ಯವಸ್ಥೆಗಳನ್ನು ದುರುಪಯೋಗಪಡಿಸಿ ನಕಲು ಮಾಡಿರುವುದು ಈ ಹಿಂದೆ ಹಲವು ಬಾರಿ ಪತ್ತೆಯಾಗಿತ್ತು. ಈ ಹಿನ್ನೆಲೆ ಪರೀಕ್ಷೆಯಲ್ಲಿ ನಕಲು ಮಾಡುವ ಆತಂಕವಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 2G, 3G, 4G ಡೇಟಾ, SMS/MMS, ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳನ್ನೂ ನಿಷೇಧಿಸಲಾಗುವುದು ಎಂದು ತಿಳಿದುಬಂದಿದೆ.

Also Read  ಮುಂದುವರಿದ ನೈತಿಕ ಪೊಲೀಸ್ ಗಿರಿ- ನಾಲ್ವರು ಅರೆಸ್ಟ್

error: Content is protected !!
Scroll to Top