ಆರ್ ಸಿಬಿ ನಾಯಕ ಸ್ಥಾನಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿ..!

(ನ್ಯೂಸ್ ಕಡಬ) Newskadaba.com ದುಬೈ, ಅ. 13. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ಕಣ್ಣೀರಿನ ವಿದಾಯ ಹೇಳಿದ್ದಾರೆ. ತಮ್ಮ ನಾಯಕತ್ವದ 9 ಟೂರ್ನಿಯಲ್ಲೂ ಆರ್ ಸಿಬಿ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗದಿರುವ ಹಿನ್ನೆಲೆ ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕೊಹ್ಲಿ ವೃತ್ತಿ ಜೀವನದಲ್ಲಿ ಆರ್ಸಿಬಿಯ ನಿರಂತರ ಸೋಲು ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಈ ವರ್ಷದ ಕೆಕೆಆರ್ ವಿರುದ್ಧದ ಪಂದ್ಯಾಟದಲ್ಲಿ ಸೋಲುಂಡ ಬಳಿಕ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ. ಈ ಸಂದರ್ಭದಲ್ಲಿ “ನಾನು ತಂಡದಲ್ಲಿರುವ ಯುವ ಆಟಗಾರರಿಗೆ ಆತ್ಮವಿಶ್ವಾಸ ಹಾಗೂ ಸ್ವತಂತ್ರವಾಗಿ ಆಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಭಾರತ ತಂಡದಲ್ಲಿಯೂ ನಾನು ಇಂತಹದೇ ಪ್ರಯತ್ನ ಮಾಡಿದ್ದೇನೆ. ಆರ್ ಸಿಬಿಗೆ ನಾನು ಶ್ರೇಷ್ಟ ಕೊಡುಗೆಯನ್ನೂ ನೀಡಿದ್ದೇನೆ. ಮುಂದಿನ ಮೂರು ವರ್ಷಗಳಿಗೆ ಹೊಸದಾಗಿ ತಂಡವನ್ನು ಕಟ್ಟಬೇಕಾದ ಅಗತ್ಯವಿದೆ. ಐಪಿಎಲ್ ನಲ್ಲಿ ಬೇರೆ ಯಾವುದೇ ತಂಡದ ಪರವಾಗಿ ನಾನು ಆಡುವುದಿಲ್ಲ. ಕೊನೆಯ ದಿನದವರೆಗೂ ನಾನು ಆರ್ ಸಿಬಿ ತಂಡದಲ್ಲಿಯೇ ಇರುತ್ತೇನೆ ಎಂದು ವಿರಾಟ್ ಕೊಹ್ಲಿ ಭಾವುಕರಾಗಿ ಹೇಳಿದರು.

Also Read  ಮೀನಿನ ಪ್ರಸಾದ ಸೇವಿಸಿದ್ರೆ ಅಸ್ತಮಾ ರೋಗ ಸಂಪೂರ್ಣ ಗುಣವಾಗುತ್ತದೆ..!

error: Content is protected !!
Scroll to Top