ನಂದಿನಿ ಹಾಲಿನ ವಾಹನ ಡಿಕ್ಕಿ► ನೂರಾರು ಹಾಲಿನ ಪ್ಯಾಕೆಟ್ ಮಣ್ಣುಪಾಲು…!!!

(ನ್ಯೂಸ್ ಕಡಬ) newskadaba.com ಮಂಡ್ಯ, ಅ.31. ನಂದಿನಿ ಹಾಲಿನ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ ಬಳಿ ಮಂಗಳವಾರ ಮುಂಜಾನೆ ನಡೆದಿದೆ.

ವಾಹನ ಉರುಳಿ ಬಿದ್ದ ಪರಿಣಾಮ ನಂದಿನಿ ಹಾಲಿನ ನೂರಾರು ಪ್ಯಾಕೆಟ್ ಹಳ್ಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು, ಕೆಲವೊಂದು ಹಾಲಿನ ಪ್ಯಾಕೆಟ್ ಒಡೆದು ಹೋಗಿ ಹಾಲು ಮಣ್ಣು ಪಾಲಾಗಿದೆ.

ಚೆನ್ನಾಗಿರುವ ಹಾಲಿನ ಪ್ಯಾಕೆಟ್ ಗಳನ್ನು ಬೇರೊಂದು ವಾಹನದಲ್ಲಿ ಬೆಳ್ಳೂರಿಗೆ ಸಾಗಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಒಂದಷ್ಟು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Scroll to Top