ಪುತ್ತೂರು: ಪ್ರಕೃತಿ ವೈಚಿತ್ರ್ಯಕ್ಕೆ ಸಾಕ್ಷಿಯಾದ ಬಾಳೆಗಿಡ ► ಗಿಡದ ಮಧ್ಯ ಭಾಗದಿಂದ ಹೊರಬಂದ ಬಾಳೆಗೊನೆ..!!!

(ನ್ಯೂಸ್ ಕಡಬ) newskadaba.com ಪುತ್ತೂರು, ಅ.31. ಬಾಳೆಗಿಡವು ಗೊನೆ ಹಾಕುವುದು ಸಾಮಾನ್ಯ. ಆದರೆ ಇಲ್ಲೊಂದು ಬಾಳೆಗಿಡವು ಗಿಡದ ನಡುಭಾಗದಲ್ಲಿ ಗೊನೆ ಹಾಕುವ ಮೂಲಕ ಪ್ರಕೃತಿ ವೈಚಿತ್ರ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.

ಕುಂಬ್ರದ ಕೊಲ್ಲಾಜೆಯ ಕೊಂಬರಡ್ಕದ ಬಾಲಕೃಷ್ಣ ಶೆಟ್ಟಿ ಎಂಬವರ ತೋಟದಲ್ಲಿರುವ ಬಾಳೆಗಿಡದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಎಲ್ಲಾ ಬಾಳೆಗಿಡದಲ್ಲಿ ಗಿಡದ ತುದಿ ಭಾಗದಿಂದ ಗೊನೆ ಹೊರಬಂದರೆ, ಈ ಬಾಳೆಗಿಡದಲ್ಲಿ ಗಿಡದ ಮಧ್ಯ ಭಾಗದಿಂದ ಬಾಳೆಗೊನೆ ಹೊರಬಂದಿದೆ.

Scroll to Top