OLX ‌ನೆರವಿನಿಂದ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ ➤ ಗ್ರಾಹಕರ ಸೋಗಿನಲ್ಲಿ ಬಂದು ಆರೋಪಿಯನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕೇರಳ, ಆ.31. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಎರಡೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಓಎಲ್ಎಕ್ಸ್ ಸಹಾಯದಿಂದ ಕೊನೆಗೂ ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ ಪ್ರವೀಣ್ ಎಂದು ಗುರುತಿಸಲಾಗಿದೆ. ಈತ 2019ರಲ್ಲಿ ಕೇರಳದ ಕೊಚ್ಚಿನ್ ನಲ್ಲಿ ಕೆಲಸಕ್ಕಿದ್ದು, ಈ ವೇಳೆ ಅಲ್ಲಿನ ಯುವತಿಯನ್ನು ಪ್ರೀತಿಸಿದ್ದಲ್ಲದೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇಬ್ಬರೂ ಕೆಲ ಸಮಯ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆ ಬಳಿಕ ಇಬ್ಬರ ನಡುವೆ ಬಿರುಕು ಉಂಟಾಗಿ ಪ್ರವೀಣ್ ಊರಿಗೆ ಮರಳಿದ್ದ. ಅತ್ತ ಅತ್ಯಾಚಾರ ಎಸಗಿರುವುದಾಗಿ ಯುವತಿಯು ಕೇರಳ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

Also Read  ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್...!

ಇದೀಗ ಎರಡೂವರೆ ವರ್ಷಗಳ ನಂತರ ಆರೋಪಿಯು ಓಎಲ್ಎಕ್ಸ್ ನಲ್ಲಿ ಕಾರು ಮಾರಾಟಕ್ಕೆ ಇಟ್ಟಿರುವುದನ್ನು ಗಮನಿಸಿದ ಕೇರಳ ಪೊಲೀಸರು ಗ್ರಾಹಕರ ಸೋಗಿನಲ್ಲಿ ಆಗಮಿಸಿ ಆರೋಪಿ ಪ್ರವೀಣ್ ನನ್ನು ಬಂಧಿಸಿದ್ದಾರೆ.

 

 

 

error: Content is protected !!
Scroll to Top