ಭಾನುವಾರ ಪ್ರಧಾನಿ ಧರ್ಮಸ್ಥಳಕ್ಕೆ ಭೇಟಿ ► ಭಕ್ತರಿಗೆ ದರ್ಶನ ಭಾಗ್ಯ ನಿಷೇಧ..!!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.26. ಭಾನುವಾರ(ಅ.29 ಕ್ಕೆ) ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನಲೆಯಲ್ಲಿ  ಅ. 28 ರ ಮಧ್ಯಾಹ್ನ 2 ರಿಂದ 29 ರ ಮಧ್ಯಾಹ್ನ 2 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧೀಸಲಾಗಿದೆ.

ಧರ್ಮಸ್ಥಳ ಸುತ್ತಮುತ್ತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದಿಂದ ಕಾರ್ಯಚರಣೆ ಆರಂಭವಾಗಿದೆ. SPG ತಂಡ ಭದ್ರತೆ ಪರಿಶೀಲಿಸಿದ ಎಡಿಜಿಪಿ ಮೋದಿ ಭದ್ರತೆಗೆ 2500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಪ್ರಧಾನಿ ಭೇಟಿ ವೇಳೆ ಭದ್ರತೆ ಒದಗಿಸಲು ಹತ್ತು ಮಂದಿ ಎಸ್ಪಿ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹಂತದಿಂದ ಡಿವೈಎಸ್ಪಿ ಹಂತದವರೆಗಿನ 150 ಅಧಿಕಾರಿಗಳ ನಿಯೋಜನೆ ಉಜಿರೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ನಿಯೋಜನೆ ಧರ್ಮಸ್ಥಳಕ್ಕೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯ 25 ತಂಡಗಳು ಕೂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.

Scroll to Top