ರೂಪದರ್ಶಿಯನ್ನು 22 ದಿನ ಕೂಡಿ ಹಾಕಿ ಅತ್ಯಾಚಾರಗೈದ ಉದ್ಯಮಿ ➤ ಸಿಗರೇಟ್ ನಿಂದ ಸುಟ್ಟು ವೀಡಿಯೋ ಚಿತ್ರಣ

(ನ್ಯೂಸ್ ಕಡಬ) newskadaba.com ಕೊಚ್ಚಿನ್, ಜೂ.09. ರೂಪದರ್ಶಿ ಯುವತಿಯನ್ನು 22 ದಿನಗಳ ಕಾಲ ಫ್ಲ್ಯಾಟ್ ವೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರಗೈದಿರುವ ಘಟನೆ ಕೇರಳದ ಕೊಚ್ಚಿನ್ ನಲ್ಲಿ ವರ್ಷಾರಂಭದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೇರಳದ ಪ್ರಸಿದ್ಧ ಉದ್ಯಮಿಯೋರ್ವ ಸಂತ್ರಸ್ತ ರೂಪದರ್ಶಿಯನ್ನು ಫ್ಲ್ಯಾಟ್ ವೊಂದರಲ್ಲಿ ಕೂಡಿ ಹಾಕಿ ನಿರಂತರ ಅತ್ಯಾಚಾರಗೈದಿದ್ದಲ್ಲದೇ ಸಿಗರೇಟ್ ನಿಂದ ರೂಪದರ್ಶಿಯ ಮೈಗೆ ಸುಟ್ಟಿದ್ದ ಎನ್ನಲಾಗಿದೆ. 22 ನೇ ದಿನದಂದು ಆಕೆ ಫ್ಲ್ಯಾಟ್ ನಿಂದ ತಪ್ಪಿಸಿಕೊಂಡು ಹೊರಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಯಾವುದೇ ಕ್ರಮ ಜರಗಿಸದ ಹಿನ್ನೆಲೆಯಲ್ಲಿ ಯುವತಿಯು ತನ್ನ ಸ್ನೇಹಿತೆಯರಿಗೆ ಅತ್ಯಾಚಾರದ ವಿಚಾರ ತಿಳಿಸಿದ್ದಾಳೆ. ಆಕೆಯ ಸ್ನೇಹಿತರು ಸುಟ್ಟ ಗಾಯಗಳ ಫೋಟೋ ಹರಿಯಬಿಟ್ಟಾಗ ವಿಚಾರ ಹೊರ ಪ್ರಪಂಚಕ್ಕೆ ತಿಳಿದುಬಂದಿದೆ.

Also Read  ಮಕ್ಕಳ ಅಶ್ಲೀಲ ಚಿತ್ರ ಡೌನ್‌ಲೋಡ್ ಮಾಡಿ ನೋಡುವುದು ಪೋಕ್ಸೊ ಕಾಯ್ದೆ- ಐಟಿ ನಿಯಮದಡಿ ಅಪರಾಧ ಸುಪ್ರೀ ಕೋರ್ಟ್

ಮಹಿಳಾ ಹಕ್ಕುಗಳ ರಾಜ್ಯ ಘಟಕವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೇ ಪ್ರಕರಣದ ಕುರಿತು ಎರಡು ದಿನಗಳಲ್ಲಿ ವಿವರಗಳನ್ನು ಕಲೆಹಾಕುವಂತೆ ಕೋರ್ಟ್ ಸೂಚಿಸಿದ್ದು, ವಿಶೇಷ ತಂಡವನ್ನೂ ರಚಿಸುವಂತೆ ಸೂಚಿಸಿದೆ. ಇದರಂತೆ ಕೊಚ್ಚಿನ್ ಪೊಲೀಸ್ ಕಮೀಶನರ್ ಸಿ. ನಾಗರಾಜ್ ಅವರು, ಅರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ.

 

 

 

error: Content is protected !!
Scroll to Top