14 ವರ್ಷದ ಬಾಲಕನನ್ನು ಪ್ರೀತಿಸಿ ಪರಾರಿಯಾದ 2 ಮಕ್ಕಳ ತಾಯಿ ➤ ಮುಂದೆ ನಡೆದಿದ್ದೇ ಬೇರೆ

(ನ್ಯೂಸ್ ಕಡಬ) newskadaba.com ಛತ್ತೀಸ್ಗಢ, ಜೂ.07. ಎರಡು ಮಕ್ಕಳ ತಾಯಿಯೋರ್ವಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಚಿತ್ರ ಘಟನೆ ಛತ್ತೀಸ್ಗಢದಿಂದ ವರದಿಯಾಗಿದೆ.

ಛತ್ತೀಸ್ಗಢದ ಕೊರಬಾ ನಿವಾಸಿ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮಹಿಳೆಯ ಪತಿಯು ಸರ್ಕಾರಿ ನೌಕರನಾಗಿ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಮಹಿಳೆಗೆ ತನ್ನ ಮಗನ ವಯಸ್ಸಿನ ಬಾಲಕನ ಮೇಲೆ ಪ್ರೇಮಾಂಕುರವಾಗಿದ್ದು, ಆತನನ್ನು ಪುಸಲಾಯಿಸಿ ಆತನ ಜೊತೆ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಕೈಗೊಂಡ ಪೊಲೀಸರು ಜೋಡಿಯನ್ನು ಜಾಂಜ್ಗಿರ್ ಜಿಲ್ಲೆಯ ಚಂಪಾ ಎಂಬಲ್ಲಿ ಪತ್ತೆಹಚ್ಚಿ ಕರೆ ತಂದಿದ್ದಾರೆ. ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಮಹಿಳೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಬಾಲಕನನ್ನು ಆತನ ಮನೆಯವರಿಗೆ ಒಪ್ಪಿಸಲಾಗಿದೆ.

Also Read  ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮತ್ತೊಮ್ಮೆ ಅವಕಾಶ

 

 

 

error: Content is protected !!
Scroll to Top