(ನ್ಯೂಸ್ ಕಡಬ) newskadaba.com ಸುಳ್ಯ, ಜೂ.06. ಎನ್ಎಂಸಿ ಸುಳ್ಯದ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ.ಪಿ.ಯವರು ಉತ್ತರಕಾಶಿ, ಉತ್ತರಾಖಂಡದಲ್ಲಿ ಎನ್.ಸಿ.ಸಿ. ವತಿಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ 19 ಕೆಎಆರ್ ಬೆಟಾಲಿಯನ್ , ಎನ್.ಸಿ.ಸಿ. ಮಡಿಕೇರಿಯಿಂದ ಆಯ್ಕೆ ಯಾದ ಏಕೈಕ ವಿದ್ಯಾರ್ಥಿನಿ ಯಾಗಿದ್ದಾರೆ.
2021 ಜೂನ್ 6 ರಿಂದ ಜೂನ್ 19 ರವರೆಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಡ್ವೆಂಚರ್ಸ್ ಕೋರ್ಸ್ ಕ್ಯಾಂಪ್ ಇದಾಗಿದೆ. ಇವರಿಗೆ ಎನ್ಎಂಸಿ ಕಾಲೇಜಿನ ಎನ್.ಸಿ.ಸಿ ಘಟಕದ ಎಎನ್ಒ ಲೆಫ್ಟಿನೆಂಟ್ ಸೀತರಾಮ ಎಂ.ಡಿ. ಯವರು ಮಾರ್ಗದರ್ಶನ ನೀಡಿರುತ್ತಾರೆ. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಎಲಿಮಲೆ ಜ್ಞಾನ ದೀಪ ವಿದ್ಯಾಸಂಸ್ಥೆ ಯಲ್ಲಿ ವ್ಯಾಸಂಗ ಮಾಡಿದ್ದು, ಪದವಿ ಪೂರ್ವ ಶಿಕ್ಷಣವನ್ನು ಎನ್ಎಂಸಿ ಕಾಲೇಜಿನಲ್ಲಿ ಮಾಡಿರುತ್ತಾರೆ. ಪ್ರಸ್ತುತ ಎನ್ಎಂಸಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಲಿಕೆಯೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುತ್ತಾರೆ. ಕಬಡ್ಡಿಯಲ್ಲಿ ರಾಜ್ಯ ಮಟ್ಟದ ತಂಡವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಇವರಿಗಿದೆ. ಇವರು ಮರ್ಕಂಜ ಗ್ರಾಮದ ಕೊಂಪುಳಿ ಪುಂಡರೀಕ ಗೌಡ ಹಾಗೂ ಜ್ಯೋತಿ ಪ್ರಭಾ ದಂಪತಿಗಳ ಪುತ್ರಿಯಾಗಿರುತ್ತಾರೆ.