ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಕರೆ ➤ ಆರೋಪಿ ಬಾಯ್ಬಿಟ್ಟ ಸತ್ಯ ಕೇಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.04. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ 22 ವರ್ಷದ ಯುವಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆಯ ವೇಳೆ ಆತನ ಉತ್ತರ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ದೆಹಲಿಯ ಸಲ್ಮಾನ್ ಎಂಬಾತ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ‌ ಮಾಡುವುದಾಗಿ ಗುರುವಾರದಂದು ಬೆದರಿಕೆ ಕರೆ ಮಾಡಿದ್ದಾನೆ. ತನಿಖೆ ಕೈಗೆತ್ತಿಕೊಂಡ ಈಶಾನ್ಯ ದೆಹಲಿಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ವಿಭಿನ್ನ ಬೇಡಿಕೆಯೊಂದು ಹೊರಬಿದ್ದಿದೆ. ಆರೋಪಿ ಸಲ್ಮಾನ್​ ವಿರುದ್ಧ ಈಗಾಗಲೇ ಅನೇಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದನೆನ್ನಲಾಗಿದೆ. ವಾಪಾಸು ಜೈಲಿಗೆ ತೆರಳಬೇಕೆಂಬ ಆಸೆಯಿದ್ದು, ಅದಕ್ಕಾಗಿ ಪ್ರಧಾನಿ ಮೋದಿಯನ್ನು ಕೊಲೆಮಾಡುವುದಾಗಿ ಬೆದರಿಕೆ ಕರೆ ಮಾಡಿದರೆ ಅನಿರ್ದಿಷ್ಟಾವಧಿ ಜೈಲಲ್ಲಿ ಇರಬಹುದೆಂಬ ಉಪಾಯಕ್ಕಾಗಿ ಕರೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

Also Read  ಪವನ್ ಗುಪ್ತಾ ಅರ್ಜಿ ವಜಾ: ನಿರ್ಭಯಾ ಅಪರಾಧಿಗಳಿಗೆ ಗಲ್ಲು ಖಾಯಂ

 

 

 

error: Content is protected !!
Scroll to Top