ಸುವೇಂದು ಅಧಿಕಾರಿಯನ್ನು ಸೋಲಿಸಿ ಗೆಲುವಿನ ನಗೆ ಬೀರಿದ ದೀದಿ ➤ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ನಂದಿಗ್ರಾಮ

(ನ್ಯೂಸ್ ಕಡಬ) newskadaba.com ಪಶ್ಚಿಮ ಬಂಗಾಳ, ಮೇ.02. ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ನಂದಿ ಗ್ರಾಮ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ದೀದಿ ಗೆಲುವಿನ ನಗೆ ಬೀರಿದ್ದಾರೆ.


ಮಮತಾ ಬ್ಯಾನರ್ಜಿಯ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ತನ್ನ ಪರಿವಾರದೊಂದಿಗೆ ಸಾಮೂಹಿಕವಾಗಿ ಬಿಜೆಪಿ ಸೇರಿ ದೀದಿ ವಿರುದ್ಧ ಗುಡುಗಿದ್ದರು. ತಾನೇ ಸಾಕಿದ ಗಿಣಿ ಕುಕ್ಕುವುದನ್ನು ಅರಿತ ಮಮತಾ ಬ್ಯಾನರ್ಜಿಯವರು ಸುವೇಂದು ಅಧಿಕಾರಿಯವರ ವಿರುದ್ಧವಾಗಿ ನಿಂತು 1200 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಖುದ್ದು ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಚಾರ ಸಭೆ ನಡೆಸಿದ್ದರಾದರೂ, ಮತದಾರ ಮಾತ್ರ ದೀದಿಯ ಕೈ ಹಿಡಿದಿದ್ದಾರೆ.

Also Read  ಲೋಕಾರ್ಪಣೆಗೆ ಸಿದ್ದವಾಯ್ತು ಕಾಸರಗೋಡು ತುಳುಭವನ

 

 

error: Content is protected !!
Scroll to Top