? ಸ್ನಾನ ಮಾಡಲೆಂದು ಹೊಳೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು



(ನ್ಯೂಸ್ ಕಡಬ) newskadaba.com ಕಾರ್ಕಳ, ಎ. 22. ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಬ್ರಿಯಲ್ಲಿ ನಡೆದಿದೆ.







ಮೃತ ಯುವಕನನ್ನು ಹೆಬ್ರಿಯ ಬೊಳಂಗಲ್‌ ನಿವಾಸಿ ಕೃಷ್ಣಮೂರ್ತಿ (30) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಜವಳಿ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ತಮ್ಮ ಮನೆಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ. ಏ. 20 ರಂದು ಮನೆಗೆ ಬಂದಿದ್ದ ಈತ ಏ. 21 ರಂದು ಸ್ನಾನ ಮಾಡಲು ತಮ್ಮ ಮನೆಯ ಸಮೀಪದ ಹೆಬ್ರಿ ಗ್ರಾಮದ ಜರ್ವತ್ತು ಹೊಳೆಗೆ ಹೋಗಿದ್ದು, ತುಂಬಾ ಹೊತ್ತಾದರು ಕೃಷ್ಣಮೂರ್ತಿ ಅವರು ವಾಪಾಸ್‌ ಬಾರದ ಕಾರಣ ಮನೆಯವರು ಹೊಳೆಯ ಬಳಿ ತೆರಳಿ ಹುಡುಕಾಡಿದಾಗ ಕೃಷ್ಣಮೂರ್ತಿ ಅವರ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top