(ನ್ಯೂಸ್ ಕಡಬ) newskadaba.com, ಜೂ.16 ಮಂಗಳೂರು: ಇಲ್ಲಿನ ಪ್ರಸಿದ್ಧ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಆರೋಗ್ಯ ರಕ್ಷಣೆ ಹಾಗೂ ರೋಗಗಳ ಮುನ್ನೆಚ್ಚರಿಕೆಗಾಗಿ ‘ಆರೋಗ್ಯವನ್ನು ರಕ್ಷಿಸೋಣ ಪ್ರಯಾಣವನ್ನು ಮುಂದುವರಿಸೋಣ’ ಎಂಬ ವಿಶೇಷ ಫುಲ್ ಬಾಡಿ ಹೆಲ್ತ್ ಚೆಕ್‌ಅಪ್ ಪ್ಯಾಕೇಜ್ ಅನ್ನು ಪ್ರಕಟಿಸಿದೆ. ರೂ. 17,000 ಮೌಲ್ಯದ ಈ ಸಮಗ್ರ ಪ್ಯಾಕೇಜ್ ಜುಲೈ 1 ರಿಂದ ಆಗಸ್ಟ್ 31 ರವರೆಗೆ ಕೇವಲ ರೂ. 7,999 ರ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿರಲಿದೆ.
ಈ ಪ್ಯಾಕೇಜ್‌ನಲ್ಲಿ ಕಲರ್ ಡಾಪ್ಲರ್ ECHO, TMT, ECG, ಅಲ್ಟ್ರಾಸೌಂಡ್ ಸ್ಕ್ಯಾನ್, ಎದೆಯ ಎಕ್ಸ್-ರೇ, ಲಿಪಿಡ್ ಪ್ರೊಫೈಲ್, ಲಿವರ್ ಹಾಗೂ ಕಿಡ್ನಿ ಕಾರ್ಯನಿರ್ವಹಣೆ ಪರೀಕ್ಷೆ ಸೇರಿದಂತೆ ಪ್ರಮುಖ ರಕ್ತ ಮತ್ತು ಮೂತ್ರ ಪರೀಕ್ಷೆಗಳು ಒಳಗೊಂಡಿವೆ. ಇದರೊಂದಿಗೆ ಹೃದ್ರೋಗ, ನರವಿಜ್ಞಾನ, ಸ್ತ್ರೀರೋಗ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಸಮಾಲೋಚನೆ ಹಾಗೂ ಉಚಿತ ಉಪಹಾರದ ವ್ಯವಸ್ಥೆಯೂ ಇರಲಿದೆ.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: +91 72590 16560 / 0824 2880 880.









