ಬಜ್ಪೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮಳಲಿ ಸಂಕೇಶದಲ್ಲಿ 127 ಲೋಡ್ ಅಕ್ರಮ ಮರಳು ವಶ, ಇಬ್ಬರ ವಿರುದ್ಧ ಕೇಸ್



(ನ್ಯೂಸ್‌ ಕಡಬ) newskadaba.com,  ಜೂ.17: ಮಂಗಳೂರು ಸಮೀಪದ ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಫಲ್ಗುಣಿ ನದಿಯಿಂದ ಪರವಾನಗಿ ಇಲ್ಲದೆ, ಸರ್ಕಾರಕ್ಕೆ ರಾಯಲ್ಟಿ ಪಾವತಿಸದೆ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿದ್ದ ಬೃಹತ್ ಜಾಲವನ್ನು ಬಜ್ಪೆ ಪೊಲೀಸರು ಪತ್ತೆಹಚ್ಚಿದ್ದಾರೆ.







ವಿಶ್ವಾಸಾರ್ಹ ಮಾಹಿತಿ ಮೇರೆಗೆ ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಸಾರ್ವಜನಿಕರ ಸಮ್ಮುಖದಲ್ಲಿ ವಿವಿಧೆಡೆ ದಾಳಿ ನಡೆಸಿದೆ. ಕಾರ್ಯಾಚರಣೆ ವೇಳೆ ಫಲ್ಗುಣಿ ನದಿ ರಸ್ತೆ, ಬನತ್ತಡಿ ರಸ್ತೆ, ಗುಡ್ಡದ ಪ್ರದೇಶ ಹಾಗೂ ಸೀತಾರಾಮ ಭಜನಾ ಮಂದಿರದ ಬಳಿಯ ಮುಕ್ತ ವಲಯಗಳಲ್ಲಿ ಸಂಗ್ರಹಿಸಿಡಲಾಗಿದ್ದ ಒಟ್ಟು 127 ಲೋಡ್ ಅಕ್ರಮ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.






ಈ ಸಂಬಂಧ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಎಂಬುವವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.

error: Content is protected !!
Scroll to Top