ಡ್ರಗ್ಸ್ ದಂಧೆ ಪ್ರಕರಣ ➤ ಬಿಜೆಪಿ ಮುಖಂಡ ಹಾಗೂ ಇಬ್ಬರು ಪುತ್ರರು ಪೊಲೀಸ್ ಬಲೆಗೆ



(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಫೆ. 24. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರನ್ನು ಮಂಗಳವಾರ ರಾತ್ರಿ ಪುರ್ಬಾ ಬರ್ಧಮಾನ್ ಜಿಲ್ಲೆಯ ಗಲ್ಸಿ ಎಂಬಲ್ಲಿ ಕೋಲ್ಕತ್ತಾ ಪೋಲೀಸರು ಬಂಧಿಸಿದ್ದಾರೆ.





ಇದರ ಜೊತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ರಾಕೇಶ್ ಸಿಂಗ್ ಅವರ ಇಬ್ಬರು ಪುತ್ರರನ್ನೂ ಬಂಧಿಸಲಾಗಿದೆ. ಇತ್ತೀಚೆಗೆ ಕೊಕೇನ್ ಸಾಗಿಸುತ್ತಿದ್ದ ವೇಳೆ ಬಂಧಿಸಲ್ಪಟ್ಟಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯನ್ನು ವಿಚಾರಿಸಿದ ವೇಳೆ ರಾಕೇಶ್ ಸಿಂಗ್ ಹೆಸರು ಬಹಿರಂಗಪಡಿಸಿದ್ದರು. ಈ ವಿಚಾರವಾಗಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್‌ ಅವರನ್ನು ಬಂಧಿಸಲಾಗಿದೆ.






error: Content is protected !!
Scroll to Top