(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.15. ದೇಶದಲ್ಲಿ ಪೆಟ್ರೋಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಇದೇ ಮೊದಲ ಬಾರಿ ಎಂಬಂತೆ ಪೆಟ್ರೋಲ್ ಬೆಲೆ 100 ರೂ. ದಾಟಿ ದಾಖಲೆ ಬರೆದಿದೆ.
ಪ್ರತಿದಿನ ಇಪ್ಪತ್ತರಿಂದ ಮೂವತ್ತು ಪೈಸೆ ಏರಿಕೆಯಾಗುತ್ತಿದ್ದು, ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗ ಬೆಲೆ 99.29 ರೂ. ಹಾಗೂ, ಡೀಸೆಲ್ ಬೆಲೆ 91.17 ರೂ. ಗೆ ಏರಿದೆ. ಪ್ರೀಮಿಯಮ್ ಪೆಟ್ರೋಲ್ ದರ ಪ್ರತೀ ಲೀಟರ್‌ಗೆ 102.07 ರೂ.ಗೆ ಏರಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಖಲೆಯ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗೆ 91.70 ರೂ., ಹಾಗೂ ಡೀಸೆಲ್‌ಗೆ 83.81 ರೂ.ಗೆ ತಲುಪಿದೆ. ಮಹಾರಾಷ್ಟ್ರದ ಪರ್ಬನಿಯಲ್ಲೂ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 100.16 ರೂ. ಆಗಿದೆ.