ಚಾಕುವಿನಿಂದ ಇರಿದು ಬಿಜೆಪಿ ಕಾರ್ಯಕರ್ತನ ಕೊಲೆ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 12. ಬಿಜೆಪಿ ಕಾರ್ಯಕರ್ತನನ್ನು ಇರಿದು ಕೊಲೆ ಮಾಡಿದ ಘಟನೆ ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ನಡೆದಿದೆ.

ಕೊಲೆಗೀಡಾದವರನ್ನು ರಿಂಕು ಶರ್ಮಾ ಎಂದು ಗುರುತಿಸಲಾಗಿದೆ. ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ನಡೆದ ವಾಗ್ವಾದದಲ್ಲಿ ರಿಂಕು, ಡ್ಯಾನಿಶ್ ಎಂಬಾತನಿಗೆ ಕಪಾಳಮೋಕ್ಷ ಮಾಡಿದ್ದು, ಈ ಸಂದರ್ಭ ಆತನ ಗೆಳೆಯರು ರಿಂಕು ಮೇಲೆ ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಯಾರೂ ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆಗಳನ್ನು ಹೊಂದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸುಧಾಂಶು ಧಮಾ ಹೇಳಿದ್ದಾರೆ.

Also Read  ಪುತ್ತೂರು: ಪುಟ್ಟ ಕಂದಮ್ಮನನ್ನು ಒಂಟಿಯಾಗಿ ಕಾರಿನೊಳಗೆ ಬಿಟ್ಟು ತೆರಳಿದ ಪೋಷಕರು ➤ ಹೊರಬರಲಾರದೆ ಇಕ್ಕಟ್ಟಿನಲ್ಲಿ ಒದ್ದಾಡಿದ ಪುಟ್ಟ ಮಗು

error: Content is protected !!
Scroll to Top