? ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್ ಹಾಗೂ ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ ಭೂಪ…!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಫೆ. 05. ದಂಡ ಹಾಕಿದ್ದಾರೆ ಎಂಬ ಕೋಪದಿಂದ ವ್ಯಕ್ತಿಯೋರ್ವ ಟ್ರಾಫಿಕ್ ಸಿಗ್ನಲ್ ಮತ್ತು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ ಆರೋಪಿ ವಿದ್ಯುತ್ ಇಲಾಖೆಯ ನೌಕರನನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಎ.ರಮೇಶ್ ಎಂದು ಗುರುತಿಸಲಾಗಿದೆ. ಈತ ಸಂಚಾರಿ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ದಂಡ ವಿಧಿಸಿದ್ದರು. ಕೆಲ ದಿನಗಳ ಹಿಂದೆ ರಮೇಶ್ ಅವರ ಬೈಕನ್ನು ಓರ್ವ ಅಪ್ರಾಪ್ತ ಓಡಿಸುತ್ತಿದ್ದು, ಹಾಗಾಗಿ ಪೊಲೀಸರು ಬೈಕ್ ತಡೆ ಹಿಡಿದು, ರಮೇಶ್ ಮನವಿ ಮಾಡಿಕೊಂಡರಾದರೂ ನಿಯಮದ ಪ್ರಕಾರ ದಂಡ ವಿಧಿಸಿದ್ದರು. ಇದರಿಂದ ಕೋಪಗೊಂಡ ರಮೇಶ್ ಮೊದಲಿಗೆ ಟ್ರಾಫಿಕ್ ಸಿಗ್ನಲ್ ಸಂಪರ್ಕ, ಜಿಡಿಮೆಟಲಾ ಸ್ಟೇಶನ್ ಮತ್ತು ಎಲ್ ಆ್ಯಂಡ್ ಓ ಪೊಲೀಸ್ ಸ್ಟೇಶನ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Also Read  ದೇವಸ್ಥಾನ ಧ್ವಂಸ-ಬಿಸಾಡಿದ್ದ ಶ್ರೀರಾಮನ ವಿಗ್ರಹ ನದಿಯಲ್ಲಿ ಪತ್ತೆ        

error: Content is protected !!
Scroll to Top