ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ➤ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 04. ಹಿಂದೂ ಧರ್ಮದ ಬಗ್ಗೆ ಸಾಹಿತಿ ಪ್ರೊ. ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಹಿತಿ ಭಗವಾನ್ ಅವರ ಮುಖಕ್ಕೆ ಬಿಜೆಪಿ ಪರ ವಕೀಲೆ ಮೀರಾ ರಾಘವೇಂದ್ರ ಅವರು ಕೋರ್ಟ್ ಆವರಣದಲ್ಲಿ ಮಸಿ ಬಳಿದ ಘಟನೆ ನಡೆದಿದೆ.

ಹಿಂದೂ ಧರ್ಮವನ್ನು ಅವಹೇಳಿಸಿದ್ದಾರು ಎಂದು ಮೀರಾ ಅವರು ಪ್ರಕರಣ ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಕೋರ್ಟ್ ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಹಿಂದೂ ಧರ್ಮ ಮತ್ತು ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಈ ಕೃತ್ಯವನ್ನು ಎಸಗಿರುವುದಾಗಿ ಮೀರಾ ಹೇಳಿಕೊಂಡಿದ್ದಾರೆ.

Also Read  ದೆಹಲಿ ಅತಿಕ್ರಮಣ ವಿರೋಧಿ ಅಭಿಯಾನ ➤ ಮಸೀದಿ ಮತ್ತು ದೇವಸ್ಥಾನಗಳ ನೆಲಸಮ

error: Content is protected !!
Scroll to Top