(ನ್ಯೂಸ್ ಕಡಬ) newskadaba.com ಪಾಟ್ನಾ, ಫೆ. 04. ಪಿಯುಸಿ ತೇರ್ಗಡೆಯಾಗಿರುವ ಅವಿವಾಹಿತ ಹೆಣ್ಣು ಮಕ್ಕಳಿಗೆ ರೂ. 25 ಸಾವಿರ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಬಿಹಾರ ಸರ್ಕಾರ ಘೋಷಣೆ ಮಾಡಿದೆ.
ಸ್ತ್ರೀಯರ ಆರ್ಥಿಕ ನೆರವು ಹಾಗೂ ವಿದ್ಯಾಭ್ಯಾಸ ಸೇರಿದಂತೆ 20 ಅಂಶಗಳ ಯೋಜನೆಗೆ ಜಾರಿಗೆ ನಿರ್ಧರಿಸಿರುವ ನಿತೀಶ್ ಕುಮಾರ್ ಸರ್ಕಾರ ಅವಿವಾಹಿತ ಮತ್ತು ವಿವಾಹಿತ ಸ್ತ್ರೀಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬಿಹಾರದಲ್ಲಿ ಫೆ. 1 ರಂದು ಪಿಯುಸಿಯವರೆಗೆ ಪರೀಕ್ಷೆಗಳು ಆರಂಭವಾಗಿದ್ದು, ಇದರಲ್ಲಿ ತೇರ್ಗಡೆ ಹೊಂದಿದ ಹೆಣ್ಣು ಮಕ್ಕಳಿಗೆ ಕನ್ಯಾ ಉತ್ತಮ ಯೋಜನೆಯಡಿ ತಲಾ 25 ಸಾವಿರ ರೂ. ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.