ಸಾರ್ವಜನಿಕ ಶೌಚಾಲಯದಲ್ಲಿ ಅಕ್ರಮ ಮಾಂಸ ಮಾರಾಟ..!

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜ. 28. ಇತ್ತೀಚಿನ ದಿನಗಳಲ್ಲಿ ಹಕ್ಕಿಜ್ವರ ಬಂದ ಕಾರಣ ಮಧ್ಯಪ್ರದೇಶ ಸರಕಾರವು ನೀಮುಚ್ ಹಾಗೂ ಇಂದೋರ್ ಜಿಲ್ಲೆಗಳಲ್ಲಿ ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದು, ಇದರ ಬಳಿಕ ಕೆಲವೇ ದಿನಗಳಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿ ಮೊಟ್ಟೆ ಮತ್ತು ಮಟನ್ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.


ಇಂದೋರ್ ನ ಸಾರ್ವಜನಿಕ ಶೌಚಾಲಯವೊಂದರಲ್ಲಿ ಈ ಕೃತ್ಯ ನಡೆಯುತ್ತಿದೆ. ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ಸಾರದವಜನಿಕ ಶೌಚಾಲಯವನ್ನು ಪರಿಶೀಲನೆ ಮಾಡುತ್ತಿದ್ದ ವೇಳೆ ಈ ದೃಶ್ಯ ಕಂಡುಬಂದಿದ್ದು, ನಾಗರಿಕ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

Also Read  ಮಂಗಳೂರು : ಶಾಸಕ ಯು.ಟಿ ಖಾದರ್ ಗೆ ವಂಚಿಸಲು ಯತ್ನ..!!      ➤ ಆರೋಪಿಯ ವಿರುದ್ದ ದೂರು ದಾಖಲು              

error: Content is protected !!
Scroll to Top