ಎಜ್ಯುಕೇಶನ್ ಲೋನ್ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ➤ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ಇಂದೋರ್, ಜ. 27. ಎಜ್ಯುಕೇಶನ್ ಲೋನ್ ಕೊಡಿಸುವುದಾಗಿ ನಂಬಿಸಿ ಹದಿನಾರು ವರ್ಷದ ಅಪ್ರಾಪ್ತ ಬಾಲಕಿಯನ್ನು ಬ್ಯಾಂಕ್ ಮ್ಯಾನೇಜರ್ ಓರ್ವ ನಿರಂತರ ಅತ್ಯಾಚಾರವೆಸಗಿದ ಆರೋಪಿಯನ್ನು ಬಂಧಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಪರಿವೀಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್ ಆಗಿದ್ದು, ಸಂತ್ರಸ್ಥೆಯ ಗೆಳತಿಯ ತಾಯಿಯು ಈತನ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಲೋನ್ ಕೊಡಿಸುವ ಹಿನ್ನೆಲೆ ಈಕೆಯ ಗೆಳತಿ ಮ್ಯಾನೇಜರ್ ನ ಪರಿಚಯ ಮಾಡಿಸಿದ್ದಳು. ನಂತರದ ದಿನಗಳಲ್ಲಿ ಆತ ಸಾಲದ ಪೇಪರ್ ಗಳನ್ನು ಸರಿಪಡಿಸುವ ನೆಪದಲ್ಲಿ ಆಕೆಯ ನಂಬರ್ ಗೆ ಸಂಪರ್ಕಿಸಿದ್ದಲ್ಲದೇ, ಆಕೆಯನ್ನು ಶಾಪಿಂಗ್ ಗೂ ಕರೆದುಕೊಂಡು ಹೋಗಿದ್ದ. ಒಂದು ದಿನ ಹೋಟೆಲ್ ಗೆಂದು ಹೋಗಿ ಅತ್ಯಾಚಾರವೆಸಗಿದ್ದ, ಅಲ್ಲದೇ ಗೋವಾ ಕರೆದುಕೊಂಡು ಹೋಗಿ ಮೂರು ಬಾರಿ ಅತ್ಯಾಚಾರವೆಸಗಿರುವುದಾಗಿ ಆರೋಪಿಸಿದ್ದಾಳೆ. ಘಟನೆಯಿಂದ ಬೇಸತ್ತ ಬಾಲಕಿ ಶಿಕ್ಷಕಿಯೋರ್ವರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ರವಾನಿಸಿದ್ದು, ತಕ್ಷಣವೇ ಅಲರ್ಟ್ ಆದ ಶಿಕ್ಷಕಿ ಮನೆಯವರಿಗೆ ತಿಳಿಸಿ ಆತ್ಮಹತ್ಯೆಯನ್ನು ತಪ್ಪಿಸಿದ್ದಾರೆ. ಬಾಲಕಿಯ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Also Read  'ಕುಸ್ತಿ ನನ್ನ ವಿರುದ್ದ ಗೆದ್ದಿದೆ'            ಕುಸ್ತಿಪಟು ವಿನೇಶ್ ಫೋಗಟ್‌

error: Content is protected !!
Scroll to Top