ಕಾಡಾನೆ ದಾಳಿಗೆ ಒಳಗಾಗಿ ಉಪನ್ಯಾಸಕಿ ಮೃತ್ಯು

(ನ್ಯೂಸ್ ಕಡಬ) newskadaba.com ವಯನಾಡ್‌, ಜ. 24. ಆನೆ ದಾಳಿಗೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೇರಳದ ವಯನಾಡ್‌ ಜಿಲ್ಲೆಯ ಮೆಪ್ಪಾಡಿ ಎಂಬಲ್ಲಿ ನಡೆದಿದೆ.


ಮೃತರನ್ನು ಕಣ್ಣೂರು ಮೂಲದ ಸಹನಾ ಎಂದು ಗುರುತಿಸಲಾಗಿದೆ. ಇವರು ಶನಿವಾರದಂದು ತಮ್ಮ ಕುಟುಂಬದ ಇಬ್ಬರು ಸದಸ್ಯರೊಂದಿಗೆ ಮೆಪ್ಪಾಡಿಯ ‘ರೈನ್‌ ಫಾರೆಸ್ಟ್‌ ರೆಸಾರ್ಟ್‌’ ಗೆ ಬಂದಿದ್ದು, ಈ ವೇಳೆ ಅವರು ಟೆಂಟ್‌ ವೊಂದರಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಆನೆಯ ಶಬ್ಧ ಕೇಳಿ ಸಹಾನಾ ಮತ್ತು ಅವರ ಕುಟುಂಬದ ಸದಸ್ಯರಿಬ್ಬರು ಟೆಂಟ್‌ ನಿಂದ ಹೊರ ಬಂದಿದ್ದು, ಈ ವೇಳೆ ಕಾಡಾನೆಯೊಂದು ಅವರ ಮೇಲೆ ದಾಳಿ ನಡೆಸಿದೆ. ಸಹಾನಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ವಯನಾಡ್‌ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Also Read  ಪ್ರೇಮ ವೈಫಲ್ಯಕ್ಕೆ ಮತ್ತೊಂದು ಬಲಿ - ನೇಣು ಬಿಗಿದು ಯುವಕ ಆತ್ಮಹತ್ಯೆ

error: Content is protected !!
Scroll to Top