(ನ್ಯೂಸ್ ಕಡಬ) newskadaba.com ನವದೆಹಲಿ, ಜ. 24. ಆರ್.ಬಿ.ಐ ನೂರರ ಹಳೆ ನೋಟನ್ನು ಹಂತ ಹಂತವಾಗಿ ಹಿಂಪಡೆಯುವುದರ ಬೆನ್ನಲ್ಲೇ ಹತ್ತು ಮತ್ತು ಐದು ರುಪಾಯಿಯ ಹಳೆ ನೋಟನ್ನೂ ಹಿಂಪಡೆಯಲು ನಿರ್ಧರಿಸಿದೆ.
ಈ ಕುರಿತು ಆರ್.ಬಿ.ಐ ಅಧಿಕೃತವಾಗಿ ಹೇಳದಿದ್ದರೂ, ಮಾರ್ಚ್, ಎಪ್ರಿಲ್ ವೇಳೆಗೆ ಈ ಹಳೆಯ ನೋಟುಗಳು ಪೂರ್ತಿಯಾಗಿ ಚಲಾವಣೆ ಸ್ಥಗಿತಗೊಳ್ಳಲಿದೆ ಹಾಗೂ ಹಳೆಯ ನೋಟುಗಳನ್ನೆಲ್ಲ ಶಾಶ್ವತವಾಗಿ ಚಲಾವಣೆಯಿಂದ ಹಿಂಪಡೆಯಲು ಆರ್ ಬಿಐ ನಿರ್ಧಾರಿಸಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಈಗಾಗ್ಲೇ 100, 10 ಮತ್ತು 5ರ ಹೊಸ ನೋಟುಗಳು ಚಲಾವಣೆಗೆ ಬಂದಿದ್ದು, ಈ ಕಾರಣದಿಂದ ಹಳೆ ನೋಟನ್ನು ಮಾರ್ಚ್, ಎಪ್ರಿಲ್ ವೇಳೆಗೆ ಸಂಪೂರ್ಣ ಹಿಂದಕ್ಕೆ ಪಡೆಯಲು ಮುಂದಾಗಿದೆ ಎಂಬ ಮಾಹಿತಿ ಬ್ಯಾಂಕುಗಳಿಗೆ ಬಂದಿದೆ.