ಚಿರತೆಯನ್ನೇ ಕೊಂದು ಸಾಂಬಾರ್ ಮಾಡಿದ ಕಿರಾತಕರು ➤ ಅರಣ್ಯಾಧಿಕಾರಿಗಳಿಂದ ಐವರ ಬಂಧನ

(ನ್ಯೂಸ್ ಕಡಬ) newskadaba.com ಕೇರಳ, ಜ. 23. ಕಿರಾತಕರ ಗ್ಯಾಂಗ್ ಒಂದು ನರಭಕ್ಷಕ ಚಿರತೆಯನ್ನೇ ಕೊಂದು ಅದನ್ನು ಚೆನ್ನಾಗಿ ಸಾಂಬಾರ್ ಮಾಡಿ ತಿಂದ 5 ಜನರನ್ನು ಇದೀಗ ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಕೊಲ್ಲಿಕೊಲ್ವಿಲ್ ನ ವಿನೋದ್(45), ಕುರಿಯಾ ಕೋಸ್(74), ಸಿ.ಎಸ್ ಬಿನು(50), ಮಲಾಯಿಲ್ ಸಾಲಿ ಕಂಜಪ್ಪನ್(54) ಹಾಗೂ ವಿನ್ಸೆಂಟ್(50) ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ವಿನೋದ್ ಎಂಬಾತ ಅರಣ್ಯದಿಂದ 100 ಮೀಟರ್ ದೂರದಲ್ಲಿರುವ ಖಾಸಗಿ ಭೂಮಿಯಲ್ಲಿ ಚಿರತೆ ಹಿಡಿಯಲು ಕುಣಿಕೆ ಹಾಕಿದ್ದು, ಬುಧವಾರದಂದು ಬೆಳಗ್ಗೆ ಆರು ವರ್ಷ ಪ್ರಾಯದ ಚಿರತೆ ಕುಣಿಕೆಗೆ ಬಿದ್ದಿದೆ. ಅಲ್ಲಿಂದ ಅದನ್ನು ವಿನೋದ್ ತನ್ನ ಮನೆಗೆ ತೆಗೆದುಕೊಂಡು ಹೋಗಿ, ಅಲ್ಲಿ ಅದನ್ನು ಕೊಂದು ಸಾರು ಮಾಡಿದ್ದಾರೆ. ಬಳಿಕ ಅದರ ಹಲ್ಲು ಹಾಗೂ ಚರ್ಮವನ್ನು ಮನೆಯಲ್ಲಿ ಇರಿಸಿದ್ದಾರೆ, ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿದ ಕೇವಲ ನಾಲ್ಕು ಘಟನೆಯಲ್ಲಿ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

Also Read  2019 ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತ ಬೇಟೆಯಾಡಿದ ಬಿಜೆಪಿ ➤ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

error: Content is protected !!
Scroll to Top