ಕಬಡ್ಡಿ ಆಡುತ್ತಿದ್ದ ವೇಳೆಯೇ ಕಬಡ್ಡಿ ಪ್ರೇಮಿ ಮೃತ್ಯು

(ನ್ಯೂಸ್ ಕಡಬ) newskadaba.com ಛತ್ತೀಸಗಢ, ಜ. 22. ಕಬಡ್ಡಿ ಪ್ರೇಮಿ ಯುವಕನೋರ್ವ ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಛತ್ತೀಸಗಢ ಧಾಮ್‌ ತಾರಿ ಜಿಲ್ಲೆಯ ಗೋಜಿ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಕೋಕಾಡಿ ಗ್ರಾಮದ ನರೇಂದ್ರ ಸಾಹು ಎಂದು ಗುರುತಿಸಲಾಗಿದೆ. ಈತ ರಾತ್ರಿ ವೇಳೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ರೈಡರ್ ಆಗಿ ಎದುರಾಳಿಗಳ ಕೋರ್ಟ್‌ಗ ಕಾಲಿರಿಸಿದ್ದು, ಬಳಿಕ ಈತನನ್ನು ಎದುರಾಳಿ ತಂಡವು ಹಿಡಿದಿದೆ. ಈ ವೇಳೆ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸಾಹುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆಗೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Also Read  ಹಣದ ವಿಚಾರದಲ್ಲಿ ಹಲ್ಲೆಗೈದು; ಜೀವಬೆದರಿಕೆ - ದೂರು ದಾಖಲು

error: Content is protected !!
Scroll to Top