(ನ್ಯೂಸ್ ಕಡಬ) newskadaba.com ನವದೆಹಲಿ, ಜ.22. ನೀವು 100 ರೂಪಾಯಿಯ ಹಳೆಯ ನೋಟುಗಳನ್ನು ತೆಗೆದಿರಿಸುವುದಾದರೆ ಇಲ್ಲಿ ಗಮನಿಸಲೇಬೇಕಿದೆ. ಹಳೆಯ 100 ರೂ. ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ ಎಂದು ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ತಿಳಿಸಿದ್ದಾರೆ.
ಹಳೆಯ ನೋಟುಗಳನ್ನು ಹೋಲುವ ಖೋಟಾ ನೋಟುಗಳು ಹೆಚ್ಚಾಗಿರುವುದರಿಂದ 100 ರ ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ಕಳೆದ 6 ವರ್ಷಗಳಿಂದ ಈ ನೋಟುಗಳು ಮುದ್ರಣವಾಗುತ್ತಿಲ್ಲ. ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣವಾಗಲಿದೆ ಎಂದವರು ಹೇಳಿದ್ದಾರೆ.