(ನ್ಯೂಸ್ ಕಡಬ) newskadaba.com ಜೈಪುರ, ಜ. 20. 13 ವರ್ಷದ ಅಪ್ರಾಪ್ತ ಬಾಲಕಿಯೋರ್ವಳು ಮದುವೆಗೆ ಒಪ್ಪಲಿಲ್ಲವೆಂದು ಒಂದು ಲಕ್ಷ ರೂ. ಗಳಿಗೆ ಮಾರಾಟ ಮಾಡಿದ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ.
ಡಿಸೆಂಬರ್ ತಿಂಗಳಲ್ಲಿ ಬಾಲಕಿಗೆ ಹೆತ್ತವರು ವಿವಾಹ ನಿಶ್ಚಯಿಸಿದ್ದು, ಆದರೆ ಬಾಲಕಿ ಮದುವೆಗೆ ಒಪ್ಪಿರಲಿಲ್ಲ. ಈ ವೇಳೆ ಚಂಡಿಕೇಡಿ ಎಂಬಲ್ಲಿ ವಾಸಿವಾಗಿದ್ದ ಗೀತಾ ಸಿಂಗ್ ಎಂಬವರಿಗೆ ಬಾಲಕಿಯನ್ನು 1.21 ಲಕ್ಷ ರೂ. ಗಳಿಗರ ಮಾರಾಟ ಮಾಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ. ಮಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಾನವ ಕಳ್ಳಸಾಗಣೆ ಆರೋಪದಡಿ ಬಾಲಕಿಯ ತಾಯಿ ಸೇರಿದಂತರ ಐವರನ್ನು ಬಂಧಿಸಲಾಗಿದೆ.