ಗಣರಾಜ್ಯೋತ್ಸವದಂದು ಮೊದಲ ಬಾರಿಗೆ ಪರೇಡ್ ನಲ್ಲಿ ಪಾಲ್ಗೊಳ್ಳಲಿರುವ ರಫೇಲ್ ಯುದ್ದ ವಿಮಾನ..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ‌. 19. ಗಣರಾಜ್ಯೋತ್ಸವದಂದು ಪರೇಡ್ ನಲ್ಲಿ ಮೊದಲ ಬಾರಿಗೆ ರಫೇಲ್ ವಿಮಾನಗಳು ಪಾಲ್ಗೊಂಡು ಅಂತಿಮ ಘಟ್ಟದಲ್ಲಿ ವೈಮಾನಿಕ ಪ್ರದರ್ಶನ ನೀಡಲಿದೆ.

15 ಯುದ್ದ ವಿಮಾನಗಳು, 5 ಸಾಗಾಟ ವಿಮಾನಗಳು ಹಾಗೂ ಒಂದು ವಿಂಟೇಜ್ ವಿಮಾನ ಸೇರಿದಂತೆ 42 ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದು ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ ತಿಳಿಸಿದ್ದಾರೆ. ಪರೇಡ್ ಸಂದರ್ಭ ರುದ್ರಾ, ಸುದರ್ಶನ್, ರಕ್ಷಕ್, ಏಕಲವ್ಯ ಹಾಗೂ ಬ್ರಹ್ಮಾಸ್ತ್ರದ ರಚನೆಯನ್ನು ಕಾಣಬಹುದು ಎಂದು ಹೇಳಿದ್ದಾರೆ.

Also Read  ಬಿಹಾರದ ಶಾಲೆಯೊಂದರ ಬಿಸಿಯೂಟದಲ್ಲಿ ಹಲ್ಲಿ ಪತ್ತೆ ! ➤ 36 ವಿದ್ಯಾರ್ಥಿಗಳು ಅಸ್ವಸ್ಥ

error: Content is protected !!
Scroll to Top