(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ. 19. ವಾಟ್ಸಾಪ್ ಕಂಪನಿಯು ಜಾರಿಗೊಳಸಲು ಉದ್ದೇಶಿಸಿರುವ ಪ್ರೈವೆಸಿ ಪಾಲಿಸಿ ಅಪ್ಡೇಟ್ ನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಭಾರತ ಸರಕಾರ ವಾಟ್ಸಾಪ್ ಸಿ.ಇ.ಒ ವಿಲ್ ಕಾಥರ್ಟ್ ಅವರಿಗೆ ಪತ್ರ ಬರೆದಿದೆ.
ಭಾರತದಲ್ಲಿ ಆಕ್ರೋಶಕ್ಕೊಳಗಾಗಿರುವ ವಾಟ್ಸಾಪ್ ನ ಪ್ರಾಸ್ತಾವಿತ ಪ್ರೈವೆಸಿ ಪಾಲಿಸಿಯ ಕುರಿತಂತೆ ಯುರೋಪಿಯನ್ ದೇಶಗಳು ಹಾಗೂ ಭಾರತಕ್ಕೆ ಪ್ರತ್ಯೇಕ ಗೌಪ್ಯತಾ ನೀತಿಯೇಕೆ ಎಂದು ಪ್ರಶ್ನಿಸಿ, ಭಾರತಕ್ಕೆ ಪ್ರತ್ಯೇಕ ರೀತಿ ತಾರತಮ್ಯ ಧೋರಣೆಯಾಗಿದೆ ಎಂದು ಹೇಳಿದೆ. ಗೌಪ್ಯತಾ ನೀತಿ ಹಾಗೂ ಫೇಸ್ ಬುಕ್ ಜೊತೆಗೆ ಡಾಟಾ ಶೇರಿಂಗ್ ಭಾರತೀಯ ಬಳಕೆದಾರರಿಗೆ ಪ್ರತಿಕೂಲವಾಗಲಿದೆ ಎಂದು ಐಟಿ ಸಚಿವಾಲಯ ಹೇಳಿತ್ತು. ಭಾರತೀಯ ಸಂಸತ್ತು ವೈಯಕ್ತಿಕ ಡಾಟಾ ರಕ್ಷಣೆ ಮಸೂದೆಯನ್ನು ಪರಿಗಣಿಸುವ ಸಾಧ್ಯತೆ ಇರುವುದರಿಂದ ಇಂತಹಾ ಸಂದರ್ಭದಲ್ಕಿ ಈ ನೀತಿಯನ್ನೇಕೆ ಜಾರಿಗೆ ತರಲು ಬಯಸಿದೆ ಎಂದೂ ಸಚಿವಾಲಯ ಪ್ರಶ್ನಿಸಿದೆ.