ಮದುವೆಯಾದರೂ ಪ್ರೇಯಸಿಯ ಹಿಂದೆ ಸುತ್ತುತ್ತಿದ್ದ ಎಸ್.ಐ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ವಿಜಯವಾಡ, ಜ. 19.  ಬ್ಯೂಟಿಷಿಯನ್ ಹಿಂದೆ ಬಿದ್ದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರ ಜೀವನ ದುರಂತ ಅಂತ್ಯ ಕಂಡಿದೆ.

ಮೃತರನ್ನು ಎಸ್ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ  ಇವರು ವಿವಾಹದ ಬಳಿಕವೂ ತಮ್ಮ ಹಳೇ ಪ್ರೇಯಸಿಯ ಜೊತೆಗೆ ಇದ್ದು, ಆದರೆ ಇದೀಗ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಿಗೆ ವಿವಾಹಕ್ಕಿಂತಲೂ ಮೊದಲು ಇಲ್ಲಿನ ಬ್ಯೂಟಿಷಿಯನ್ ಜೊತೆಗೆ ಪ್ರೇಮ ಸಂಬಂಧವಿದ್ದುದರಿಂದ ಒಂದು ಬಾರಿ ಅವರನ್ನು ಅಮಾನತು ಕೂಡಾ ಮಾಡಲಾಗಿತ್ತು. ಮದುವೆಯ ಬಳಿಕ ಪತ್ನಿಯನ್ನು ಜೊತೆಗೆ ಇಟ್ಟುಕೊಳ್ಳದೇ ಬ್ಯೂಟಿಷಿಯನ್ ಜೊತೆಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ವಿಜಯ್ ವಾಸಿಸುತ್ತಿದ್ದರು. ಇದೀಗ ತಾನು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿಯೇ ವಿಜಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ವಿಜಯ್ ಅವರ ಆತ್ಮಹತ್ಯೆಗೆ ಬ್ಯೂಟಿಷಿಯನ್ ಒತ್ತಡವೇ ಕಾರಣ ಎಂದು ವಿಜಯ್ ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ದಿವಂಗತ ಸುಷ್ಮಾ ಸ್ವರಾಜ್ ಪುಣ್ಯಸ್ಮರಣೆ ➤ ಮುಖ್ಯಮಂತ್ರಿ, ಶ್ರೀರಾಮುಲು ಗೌರವ ನಮನ

 

error: Content is protected !!
Scroll to Top