8 ತಿಂಗಳ ಕಂದಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕ್ರೂರಿ ತಾಯಿ..! ➤ “ಮಗುವಲ್ಲ ಕುರಿ” ಎಂದು ಕೊಲೆಗೈದಳು..‼️

(ನ್ಯೂಸ್ ಕಡಬ) newskadaba.com ಭೋಪಾಲ್, ಜ. 19. ಹೆತ್ತ ಕರುಳ ಬಳ್ಳಿಯನ್ನೇ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಭೋಪಾಲ್ ನ ಅಶೋಕ ನಗರದಲ್ಲಿ ನಡೆದಿದೆ.

8 ತಿಂಗಳ ಮಗುವನ್ನು ತಾಯಿ ಇದ್ದಕ್ಕಿದಂತೆ ವಿಚಿತ್ರವಾಗಿ ಆಡಿದ್ದು, ಮನೆಯ ಬಳಿ ಇರುವ ಹೆದ್ದಾರಿಯಲ್ಲಿ ಮಲಗಿಸಿ, ಕೊಚ್ಚಿಕೊಂದಿದ್ದು, ಬಳಿಕ ಮೃತದೇಹವನ್ನು ಮನೆಗೆ ಎತ್ತಿಕೊಂಡು ಬಂದಿದ್ದಾಳೆ. ಈ ವೇಳೆ ಮನೆಯವರು ಮಗುವನ್ನು ಯಾಕೆ ಕೊಂದೆ? ಎಂದು ಪ್ರಶ್ನಿಸಿದಾಗ, “ಅದು ಮಗುವಲ್ಲ, ಕುರಿ” ಎಂದು ತಾಯಿ ವಿಚಿತ್ರವಾದ ಉತ್ತರವನ್ನು ನೀಡಿದ್ದಾಳೆ. ಪತ್ನಿಯ ಕೃತ್ಯದ ವಿರುದ್ಧ ಪತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಶ್ನಿಸಿದಾಗ, “ಮಗು ಮೆಟ್ಟಿಲಿನಿಂದ ಬಿದ್ದು ಸತ್ತು ಹೋಗಿದೆ” ಎಂದು ಹೇಳಿದ್ದಾಳೆ.

Also Read  ಗುಜರಾತ್ ನಿಂದ ಕ್ವಾರಂಟೈನ್ ಇಲ್ಲದೆ ಕಡಬಕ್ಕೆ ಆಗಮಿಸಿದ ಕುಟುಂಬ ➤ ಸಾರ್ವಜನಿಕರಲ್ಲಿ ಆತಂಕ

error: Content is protected !!
Scroll to Top