ಸಿಎಂ ಗೆ ಪತ್ರ ಬರೆದು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಛೇರಿಯಲ್ಲೇ ನೇಣಿಗೆ ಶರಣು…!

(ನ್ಯೂಸ್ ಕಡಬ) newskadaba.com ಗಂಗಾವತಿ, ಜ. 18. ಅರಣ್ಯ ಇಲಾಖೆಯ ಕ್ಷೇಮ ನಿಧಿ ಯೋಜನೆಯಲ್ಲಿ ಕೆಲಸ ಮಾಡುವ ನೌಕರರನ್ನು ಖಯಂಗೊಳಿಸುವಂತೆ ನಿವೃತ್ತಿ ಅಂಚಿನಲ್ಲಿದ್ದ ಅರಣ್ಯ ಇಲಾಖೆಯ ನೌಕರನೋರ್ವ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಮೃತರನ್ನು ಟಿ. ಮಲ್ಲಿಕಾರ್ಜುನ(59) ಎಂದು ಗುರುತಿಸಲಾಗಿದೆ. ಕಳೆದ ಮೂವತ್ತೇಳು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ನೌಕರನಾಗಿದ್ದ ಇವರು ಇದೇ ಬರುವ ಮೇ ತಿಂಗಳಲ್ಲಿ ನಿವೃತ್ತಿ ಹೊಂದುವವರಿದ್ದರು. ಅರಣ್ಯ ಇಲಾಖೆಯ ನೌಕರರಿಗೆ ಕೆಲಸ ಖಾಯಂ ಮಾಡಿಲ್ಲ, ಕೆಲವರು ಇದೇ ವರ್ಷ ನಿವೃತ್ತಿ ಹೊಂದಲಿದ್ದು, ಮುಂದಿನ ಭವಿಷ್ಯ ಕಷ್ಟವಾಗಿದೆ. ಸರಕಾರ ಕೂಡಲೇ ಕ್ಷೇಮನಿಧಿ ಯೋಜನೆಯಲ್ಲಿ ನೇಮಕಗೊಂಡವರನ್ನು ಖಾಯಂ ಮಾಡಬೇಕು ಎಂದು ಸಿಎಂ ಅವರಿಗೆ ಪತ್ರ ಬರೆದಿದ್ದಾನೆ. ಹಾಗೆಯೇ ನನ್ನ ಮಗ ಯಾವುದೋ ಕಾರಣಕ್ಕೆ ಜೈಲಿಗೆ ಹೋಗಿದ್ದು, ಅವನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು, ರಾಮಣ್ಣ ಎನ್ನುವವನಿಂದ ಇಪ್ಪತ್ತು ಸಾವಿರ ಸಾಲ ಪಡೆದು ಒಂದು ತಿಂಗಳು ಬಡ್ಡಿ ಪಾವತಿಸಿದ್ದು ಬಾಕಿಯುಳಿದ ಹಣವನ್ನು ಕೊಟ್ಡು ದಾಖಲೆಪತ್ರಗಳನ್ನು ಪಡೆಯುವಂತ ಕುಟುಂಬದವರಿಗೆ ಪತ್ರದಲ್ಲಿ ತಿಳಿಸಿ, ನೇಣಿಗೆ ಶರಣಾಗಿದ್ದಾನೆ.

Also Read  ಸುಬ್ರಹ್ಮಣ್ಯ: ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪ ➤ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

 

error: Content is protected !!
Scroll to Top