ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ.18. ಹಲವು ಪ್ರಕರಣಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಕುಂಬಳೆ ಕೊಯಿಪಾಡಿ ಕಡಪ್ಪುರದ ಆಸಿಫ್(28) ಎಂದು ಗುರುತಿಸಲಾಗಿದೆ. ಕುಂಬಳೆಯ ವ್ಯಕ್ತಿಯೋರ್ವನಿಂದ ಹತ್ತು ಸಾವಿರ ರೂ. ಹಣ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದನು. ಈತನು ಊರಿಗೆ ಬಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯ ಮೇರೆಗೆ ಆತನನ್ನು ಬಂಧಿಸಲಾಗಿದೆ.

Also Read  ಪೋಷಕರಿಗೆ ಗುಡ್ ನ್ಯೂಸ್ ➤ ಖಾಸಗಿ ಶಾಲಾ ಶುಲ್ಕದಲ್ಲಿ ಶೆ.35ರಷ್ಟು ಕಡಿತ ಸಾಧ್ಯತೆ..!

error: Content is protected !!
Scroll to Top