ತನ್ನಿಬ್ಬರು ಮಕ್ಕಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ…!

(ನ್ಯೂಸ್ ಕಡಬ) newskadaba.com ಮುಂಬೈ, ಜ. 16. ತನ್ನಿಬ್ಬರು ಹೆಣ್ಣು ಮಕ್ಕಳ ಮೇಲೆ ಸ್ವತಃ ತಂದೆಯೇ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬರಳಕಿಗೆ ಬಂದಿದೆ.

ತನ್ನ ಅವಳಿ ಮಕ್ಕಳ ಮೇಲೆ ನಾಲ್ಕು ವರ್ಷಗಳಿಂದಲೂ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆದರೆ, ತಮ್ಮ ತಂದೆಯ ಕೃತ್ಯವನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಮಕ್ಕಳು ಆತನ ಕೃತ್ಯಗಳನ್ನು ಸಹಿಸಿಕೊಂಡಿದ್ದರು. ಒಂದು ದಿನ ತಾಯಿಯು ಹೊರಗೆ ಹಾಲ್ ನಲ್ಲಿ ಮಲಗಿದ್ದ ವೇಳೆ ರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಮಗಳು ಅಳುವುದು ಕೇಳಿ, ಆಕೆಯ ರೂಮ್ ಗೆ ತಾಯಿ ಹೋಗಿದ್ದು, ಈ ವೇಳೆ ಆಕೆಯು ತಂದೆಯ ಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ. ಈ ವೇಳೆ ಮತ್ತೊಬ್ಬಳು ಮಗಳೂ ಕೂಡಾ ತಂದೆ ತನ್ನ ಮೇಲೂ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿಸಿದ್ದಾಳೆ. ಈ ಸಂಬಂಧ ತನ್ನ ಪತಿಯ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ.

Also Read  ವಿಟ್ಲ: ಅಪ್ರಾಪ್ತೆಯ ಅತ್ಯಾಚಾರ ಆರೋಪ* *➤ ಬಾಲಕಿಯ ಅಣ್ಣ ಸೇರಿದಂತೆ ಇಬ್ಬರ ಬಂಧನ

error: Content is protected !!
Scroll to Top