ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕ ದುರ್ಮರಣ

(ನ್ಯೂಸ್ ಕಡಬ) newskadaba.com ಮುಂಬೈ, ಜ. 15.‌ ಗಾಳಿಪಟ ಹಾರಿಸುವ ವೇಳೆ ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕಾಂಡಿವಾಲಿ ಎಂಬಲ್ಲಿ ನಡೆದಿದೆ.


ಬಾಲಕ ಗಾಳಿಪಟ ಹಾರಿಸುತ್ತಿದ್ದ ವೇಳೆ ದಾರ ಕತ್ತರಿಸಲ್ಪಟ್ಟು ಅದು ಸೆಗಣಿ ಗುಂಡಿಗೆ ಬಿದ್ದಿತ್ತು. ಅದನ್ನು ಮೇಲೆತ್ತಲೆಂದು ಬಾಲಕ ಬಗ್ಗಿದಾಗ ಆಕಸ್ಮತ್ತಾಗಿ ಗುಂಡಿಗೆ ಬಿದ್ದಿದ್ದಾನೆ. ಸಮೀಪದಲ್ಲಿಯೇ ಕಟ್ಟಡ ಕಾರ್ಮಿಕರು ಬಾಲಕನ ಬೊಬ್ಬೆ ಕೇಳಿ ಓಡಿ ಬಂದರೂ ಗುಂಡಿಯಿಂದ ಮೇಲೆತ್ತಲು ಸಾಧ್ಯವಾಗಿಲ್ಲ. ಗುಂಡಿ ಬಹಳ ಆಳವಾಗಿದ್ದು, ಊರವರು, ಪೊಲೀಸರು ಮತ್ತು ಅಗ್ನಿ ಶಾಮಕ ದಳ ಕಷ್ಟಪಟ್ಟು ಮೇಲೆತ್ತಲು ನೋಡಿದಾಗ ಬಾಲಕನ ದೇಹವು ಸಂಪೂರ್ಣ ಗುಂಡಿಯಲ್ಲಿ ಹೂತು ಹೋಗಿತ್ತು. ನಂತರ ಕ್ರೇನ್ ಉಪಯೋಗಿಸಿ ಬಾಲಕನ್ನು ಹೊರತರಲಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮಗು ಮೃತಪಟ್ಟಿತ್ತು.

Also Read  ಉಮ್ರಾ ಯಾತ್ರೆಗೆ ತೆರಳಿದ್ದ ಬಾಲಕ ಮೆಕ್ಕಾದಲ್ಲಿ ಕುಸಿದು ಬಿದ್ದು ಮೃತ್ಯು..!

error: Content is protected !!
Scroll to Top