(ನ್ಯೂಸ್ ಕಡಬ) newskadaba.com ನವದೆಹಲಿ, ಜ. 14. ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಹಾಗೂ ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೇ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲೂ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ನಿಷೇಧ ಮಾಡಲಾಗಿದೆ.
ಚೆನ್ನಾಗಿ ಬೆಂದ ಮೊಟ್ಟೆ ಹಾಗೂ ಕೋಳಿಯನ್ನು ಸೇವಿಸಿ, ಅರೆಬೆಂದ ಮಾಂಸವನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ ಎಂದು ದೆಹಲಿಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ನಡುವೆ ಹಕ್ಕಿಜ್ವರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ದೆಹಲಿ ನಾರ್ತ್ ಮತ್ತು ಸೌತ್ ಮುನ್ಸಿಪಲ್ ಕಾರ್ಪೊರೇಶನ್ ನಿಂದ ಜನವರಿ 13ರಿಂದ ಕೋಳಿ ಹಾಗೂ ಮೊಟ್ಟೆ ಮಾರಾಟ ನಿಷೇಧಿಸಿ ಆದೇಶಿಸಿದೆ.