ಗಾಂಧಿ ಪ್ರತಿಮೆಯಲ್ಲಿ ಬಿಜೆಪಿ ಧ್ವಜ ಹಾರಾಟದ ಹಿನ್ನೆಲೆ ➤ ಆರೋಪಿಯು ಮಾನಸಿಕ ಅಸ್ವಸ್ಥನೆಂದ ಪೊಲೀಸರು

(ನ್ಯೂಸ್ ಕಡಬ) newskadaba.com ಪಾಲಕ್ಕಾಡ್, ಜ. 14. ಗಾಂಧಿ ಪ್ರತಿಮೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೊಪಿಯನ್ನು ಪಾಲಕ್ಕಾಡ್‌ ನ ತಿರುನೆಲ್ಲೈ ಮೂಲದ ಬಿನೀಶ್‌ ಎಮದು ಗುರುತಿಸಲಾಗಿದೆ. ಆರೊಪಿಯು ಶನಿವಾರದಂದು  ಬೆಳಿಗ್ಗೆ 8 ಗಂಟೆ ಸುಮಾರಿಗೆ ನಗರ ಸಭೆ ಗೋಡೆಯ ಮೂಲಕ ಏರಿ ಗಾಂಧಿ ಪ್ರತಿಮೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುತ್ತಿರುವುದು ಹತ್ತಿರದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿತ್ತು. ಈ ಕುರಿತಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಗೆ ಮಾನಸಿಕ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.

Also Read  ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿ 10 ರೂ. ನೀಡಿದ ಅಜ್ಜ

error: Content is protected !!
Scroll to Top