ಕೈಕಾಲು ಕಟ್ಟಿಹಾಕಿ ಅತ್ಯಾಚಾರವೆಸಗಿದ ರೀತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಜಾರ್ಖಂಡ್, ಜ. 14. ಕೈಕಾಲು ಕಟ್ಟಿ ಹಾಕಿ ಅತ್ಯಾಚಾರ ನಡೆಸಿದ ಸ್ಥಿತಿಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹವು ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆ ನೀರಿನಲ್ಲಿ ಪತ್ತೆಯಾಗಿದೆ.

ಈ ವಿದ್ಯಾರ್ಥಿನಿ ಗೊಡ್ಡಾ ಜಿಲ್ಲೆಯವರಾಗಿದ್ದು, ಇಲ್ಲಿನ  ಹಜಾರಿಬಾಗ್  ವೈದ್ಯಕೀಯ  ಕಾಲೇಜಿನಲ್ಲಿ  ವ್ಯಾಸಂಗ ಮಾಡುತ್ತಿದ್ದರುಯುವತಿಯ ಮೃತದೇಹವನ್ನು ಕಂಡ ದಾರಿಹೋಕರು ಪೊಲಿಸರಿಗೆ ವಿಚಾರ ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿದ ಪೊಲೀಸರು ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ತನಿಖೆ ನಡೆಸುತ್ತಿರುವುದಾಗಿ ಡಿಐಜಿ .ವಿ ಓಂಕಾರ್‌ ತಿಳಿಸಿದ್ದಾರೆ.

Also Read  ಭಗತ್ ಸಿಂಗ್ ಪಾತ್ರಾಭಿನಯ ತಂದ ಸಾವು

error: Content is protected !!
Scroll to Top