ವಿವಾಹಿತ ತಂಗಿಯನ್ನೇ ಅತ್ಯಾಚಾರಗೈದ ದುಷ್ಟ ಅಣ್ಣ…! ➤ ವೀಡಿಯೋ ಚಿತ್ರೀಕರಿಸಿ ಬೆದರಿಕೆ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜ. 14. ಒಡಹುಟ್ಟಿದ ಪಾಪಿ ಅಣ್ಣನೋರ್ವ ಸ್ವತಃ ವಿವಾಹಿತ ಸಹೋದರಿಯನ್ನೇ ಅತ್ಯಾಚಾರವೆಸಗಿ, ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಘಟನೆ ಉ.ಪ್ರ. ಮೊರಾದಾಬಾದ್ ಎಂಬಲ್ಲಿ ನಡೆದಿದೆ.

ಪತಿ ಮನೆಯಲ್ಲಿ ಇಲ್ಲದ ವೇಳೆ ಆಕೆಯ ಅಣ್ಣ ಹಾಗೂ ಆತನ ಸ್ನೇಹಿತ ಪಾನಮತ್ತರಾಗಿ ಮನೆಗೆ ಬಂದಿದ್ದು, ಈ ವೇಳೆ ಅಣ್ಣನೇ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯವನ್ನು ಸ್ನೇಹಿತ ಚಿತ್ರೀಕರಿಸಿ, ವಿಚಾರವನ್ನು ಬಾಯಿ ಬಿಟ್ಟರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆತನ ಕಿರುಕುಳವನ್ನು ಸಹಿಸಲಾರದೇ ಪತಿಯಲ್ಲಿ ವಿಷಯ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 376, 452, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

Also Read  ? ಐಪಿಎಲ್ 2021 ಹರಾಜು ಪ್ರಕ್ರಿಯೆ ➤ ಕಾಸರಗೋಡು ಮೂಲದ ಅಝರುದ್ದೀನ್ ಆರ್.ಸಿಬಿ ತಂಡಕ್ಕೆ ಆಯ್ಕೆ

error: Content is protected !!
Scroll to Top