6 ತಿಂಗಳ ಗರ್ಭಿಣಿಯ ಅಪಹರಿಸಿ ಅತ್ಯಾಚಾರ ➤ ಆರೋಪಿಗಳ ಬಂಧನ



(ನ್ಯೂಸ್ ಕಡಬ) newskadaba.com ಕೊಲ್ಹಾಪುರ, ಜ. 14. 6 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಬಲವಂತವಾಗಿ ಮದುವೆಯಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.





ಆರು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಮತ್ತು ಬರುವ ಮಾತ್ರೆ ಪಾನೀಯದಲ್ಲಿ ಬೆರೆಸಿ ಕುಡಿಸಿದ ಬಳಿಕ ಗರ್ಭಿಣಿಯನ್ನು ಹಾಗೂ ಆಕೆಯ ಮೂರು ವರ್ಷದ ಮಗಳೊಂದಿಗೆ ಅಪಹರಿಸಲಾಗಿತ್ತು. ಅಸ್ಸಾಂನಿಂದ ಮಹಿಳೆಯನ್ನು ಅಪಹರಿಸಿ ಆರೋಪಿಗಳು ಅತ್ಯಾಚಾರವೆಸಗಿದ್ದು, ನಂತರ ಆರೋಪಿಗಳಲ್ಲಿ ಓರ್ವ ಆಕೆಯನ್ನು ಮದುವೆಯಾಗಿದ್ದಾನೆ. ಅಲ್ಲದೇ, ಬೇರೆ ಪುರುಷರ ಜೊತೆಗೆ ಕೂಡ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹಾಕಿದ್ದಾರೆ. ಮಹಿಳೆ ವಿರೋಧಿಸಿದಾಗ ಮೂರು ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಆರೋಪಿಗಳಿಂದ ತಪ್ಪಿಸಿಕೊಂಡ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದುತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಅತ್ಯಾಚಾರಿಗಳನ್ನು ಬಂಧಿಸಿ, ನ್ಯಾಯಾಲಯವು ಅವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.






 

error: Content is protected !!
Scroll to Top