ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸರಕಾರ ➤ ಪ್ರತಿದಿನ 2 GB ಡಾಟಾ ಫ್ರೀ..‼️

(ನ್ಯೂಸ್ ಕಡಬ) newskadaba.com ತಮಿಳುನಾಡು, ಜ.10. ಇನ್ಮುಂದೆ ರಾಜ್ಯದ ಸರಕಾರಿ ಕಾಲೇಜು ಹಾಗೂ ಸರಕಾರಿ ಅನುದಾನಿತ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರತಿದಿನ ಎರಡು ಜಿಬಿ ಉಚಿತ ಡೇಟಾ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಕೊಡುಗೆ ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಇನ್ನು ತಮಿಳುನಾಡು ವಿಧಾನಸಭಾ ಚುನಾವಣೆಯು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಲು ಈ ಹೊಸ ಕೊಡುಗೆಯನ್ನು ಘೋಷಿಸಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

Also Read  ಪೊಲೀಸ್ ಸಮವಸ್ತ್ರ ಧರಿಸಿ ವೃದ್ಧೆಯ ಚಿನ್ನ ಎಗರಿಸಿದ ಕಳ್ಳರು ! ➤ ನಾಲ್ವರು ಅರೆಸ್ಟ್…

error: Content is protected !!
Scroll to Top