ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ- ಹತ್ತು ಹಸುಗೂಸುಗಳು ಮೃತ್ಯು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್, ಜ. 09. ಮಹಾರಾಷ್ಟ್ರದ ಭಂದರಾ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 10 ನವಜಾತ ಶಿಶುಗಳು ಮೃತಪಟ್ಟ ಘಟನೆ ನಡೆದಿದೆ.

ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ಶುಶ್ರೂಷಕ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಅವಘಡದಲ್ಲಿ 17 ಮಕ್ಕಳ ಪೈಕಿ ಹತ್ತು ಮಕ್ಕಳು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಮಕ್ಕಳೆಲ್ಲ 1ರಿಂದ 3 ತಿಂಗಳ ಒಳಗಿನವು ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಬೆಂಕಿ ಹೊತ್ತಿಕಿಳ್ಳಲು ಕಾರಣವೇನೆಂದು ತಿಳಿದು ಬಂದಿಲ್ಲ. ಇಲೆಕ್ಟ್ರಿಕ್​ ಶಾರ್ಟ್​ ಸರ್ಕ್ಯೂಟ್​ ನಿಂದ ಬೆಂಕಿ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Also Read  ಪ್ರವಾಹದಲ್ಲಿ ತೇಲಿಬಂದ ಶವಗಳು.! ಸೇನಾ ಹೆಲಿಕಾಪ್ಟರ್‌ ಲ್ಯಾಂಡ್‌ ಆಗೋಕು ಸ್ಥಳವಿಲ್ಲದೆ ಪರದಾಟ

error: Content is protected !!
Scroll to Top