ಉ.ಪ್ರದೇಶದಲ್ಲಿ ಭೀಕರ ಅತ್ಯಾಚಾರ ➤ ಅತ್ಯಾಚಾರವೆಸಗಿ ಟೆರೇಸ್ ನಿಂದ ತಳ್ಳಿ ಹಾಕಿದ ವಿಕೃತ ಕಾಮಿ..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಜ. 08.ತ್ತರಪ್ರದೇಶದಲ್ಲಿ ಮಹಿಳೆಯ ತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಮೊರದಾಬಾದ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಪಾಪಿಯೋರ್ವ ಟೆರೇಸ್ ನಿಂದ ಆಕೆಯನ್ನು ತಳ್ಳಿ ಹಾಕಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಈ ಕುರಿತು ಯುವತಿಯ ತಂದೆ ದೂರು ನೀಡಿದ್ದು, ಟೆರೇಸ್ ಮೂಲಕ ಮಗಳ ಕೋಣೆಗೆ ನುಗ್ಗಿ ಗನ್ ಹಿಡಿದು ಹೆದರಿಸಿ ಅತ್ಯಾಚಾರ ಎಸಗಿದ್ದು, ಈಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ಟೆರೇಸ್ ನಿಂದ ತಳ್ಳಿ ಹಾಕಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಯುವತಿಯ ಬೊಬ್ಬೆ ಕೇಳಿ ಮನೆಯವರು ನೋಡಿದಾಗ ಯುವತಿಯ ಬೆನ್ನು ಮೂಲೆ ಮುರಿದಿದ್ದು, ತಲೆ ಹಾಗೂ ದೇಹದ ಭಾಗಗಳಿಗೆ ಗಾಯಗಳಾಗಿದ್ದವು. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಯುವಕ ಅಪಘಾತಕ್ಕೆ ಬಲಿ...!

error: Content is protected !!
Scroll to Top