(ನ್ಯೂಸ್ ಕಡಬ) newskadaba.com ನವದೆಹಲಿ, ಜ.08. ಹಕ್ಕಿ ಜ್ವರದ ಹಿನ್ನಲೆಯಲ್ಲಿ ದೇಶಾದ್ಯಂತ ಕೋಳಿ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದ್ದು, ಹರಿಯಾಣದಲ್ಲಿ 1 ಕೆಜಿ ಕೋಳಿಯು ಕೇವಲ 15 ರೂ.ನಂತೆ ಮಾರಾಟವಾಗುತ್ತಿದೆ.
ಕೋಳಿಯನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರಾದರೂ ಹಕ್ಕಿ ಜ್ವರದ ಭೀತಿಯಿಂದ ಬಹುತೇಕರು ಕೋಳಿ ಮಾಂಸವನ್ನು ತಿನ್ನುವುದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೋಳಿ ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಇನ್ನು ಕರ್ನಾಟಕದಲ್ಲೂ ಕೋಳಿಯ ಬೆಲೆ ಕುಸಿಯುತ್ತಿದ್ದು, ಕೇರಳದಿಂದ ಕರ್ನಾಟಕದ ಕರಾವಳಿಗೆ ಕೋಳಿ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.