ನವಜಾತ ಶಿಶುವನ್ನು ಇಯರ್ ಫೋನ್ ವೈರ್ ಬಿಗಿದು ಹತ್ಯೆ..! ➤ ಪಾಪಿ ತಾಯಿಯ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ. 07. ನವಜಾತ ಶಿಶುವೊಂದನ್ನು ಕುತ್ತಿಗೆಗೆ ಇಯರ್ ಫೋನ್ ಬಿಗಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯನ್ನು ಬಂಧಿಸಿದ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ಸಂಮೀಪದ ಚೇಡಕ್ಕಲ್ ಎಂಬಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ತಾಯಿಯನ್ನು ಶಹೀನಾ ಎನ್ನಲಾಗಿದೆ. ಡಿ. 16ರಂದು ಈ ಘಟನೆ ನಡೆದಿದ್ದು, ತೀವ್ರ ರಕ್ತಸ್ರಾವದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಗರ್ಭಿಣಿಯಾಗಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಮಗುವಿಗೆ ಜನ್ಮ ನೀಡಿದ್ದಾರೆಂದು ವೈದ್ಯರು ತಿಳಿಸಿದ ನಂತರ ಮನೆಯಲ್ಲಿ ಹುಡುಕಾಡಿದಾಗ ಮಂಚದ ಕೆಳಗಡೆ ಮಗುವಿನ ಮೃತದೇಹ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿ ಶಹೀನಾಳನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಸಿದ್ದರಾಮಯ್ಯರನ್ನು ಯುದ್ದರಾಮಯ್ಯ ಎಂದು ಬಣ್ಣಿಸಿದ ತೆಲುಗು ಚಾನೆಲ್

error: Content is protected !!
Scroll to Top