(ನ್ಯೂಸ್ ಕಡಬ) newskadaba.com ಮಂಬೈ, ಜ. 07. ಲಾಕ್ ಡೌನ್ ಸಮಯದಲ್ಲಿ ಮಾನವೀಯತೆ ಮೆರೆದು ಅಭಿಮಾನಿಗಳ ಪಾಲಿಗೆ ಹೀರೋ ಎನಿಸಿಕೊಂಡಿದ್ದ ಸೋನು ಸೂದ್ ಅವರ ವಿರುದ್ದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ದೂರು ದಾಖಲಿಸಿದೆ.
ಯಾವುದೇ ಅನುಮತಿಯಿಲ್ಲದೆ ಸೂದ್ ಅವರಿಗೆ ಸೇರಿದ ಶಕ್ತಿ ಸಾಗರ್ ಎಂಬ ಆರು ಅಂತಸ್ತಿನ ಕಟ್ಟಡವನ್ನು ಹೋಟೆಲ್ ಆಗಿ ಪರಿವರ್ತಿಸಿದಕ್ಕೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.








